Monday, May 20, 2024

ಸಮತೆ-ಖಚಿತ-ಸೂಚಕ

ಸಮೃದ್ಧಿಯ ಸೂಚಕ ಸಂಬಂಧಗಳ ಸಮತೆ
ಸೌಜನ್ಯದ ಸೂಚಕ ಸದ್ಗುಣಗಳ ಸಮತೆ
ಸಂತೋಷದ ಸೂಚಕ ಸರಳತೆಯ ಸಮತೆ
ಸ್ವಾತಂತ್ರ್ಯದ ಸೂಚಕ ಸಾನಿಧ್ಯದ ಸಮತೆ
ಸಮತೆ ಇರುವಲ್ಲಿ ಪ್ರೀತಿ ಖಚಿತ
ಸಮತೆ ಬೆಳಗುವಲ್ಲಿ ನೆಮ್ಮದಿ ಖಚಿತ
ಸಮತೆ ತುಂಬಿರುವಲ್ಲಿ  ಏಳಿಗೆ ಖಚಿತ
ಸಮತೆ ನೆಲೆಸಿರುವಲ್ಲಿ ಆನಂದ ಖಚಿತ
ನೋವು ಇರುವಾಗ ಸಮಾನತೆ ಸಿಗುವುದೇ?
ಕಷ್ಡಗಳು ಇರುವಾಗ ಸಮಾನತೆ ಕಾಣುವುದೇ?
ದ್ವೇಷಗಳು ಇರುವಾಗ ಸಮಾನತೆ ಬರುವುದೇ?
ಹಗೆತನ ಇರುವಾಗ ಸಮಾನತೆ ಉಳಿವುದೇ?
ಸಮಾನರು ನಾವು ಎನುವುದು ಹೃದಯದಲ್ಲಿರಬೇಕು
ಸಮಾನರು ನಾವು ಎನುವುದು ನಡತೆಯಲ್ಲಿರಬೇಕು
ಸಮಾನರು ನಾವು ಎನುವುದು ವ್ಯಕ್ತಿತ್ವದಲ್ಲಿರಬೇಕು

ಜಾತಿ - ಅಧಿಕಾರ - ಸಿರಿವಂತಿಕೆ - ವಿದ್ಯಾರ್ಹತೆ
ಎಲ್ಲವ ಮೆಟ್ಟಿ ಸಮಾನರು ನಾವು ಎನುವುದು
ಮಾನುಷ ಗುಣವಂತವನ ಹಿರಿಮೆಯ ಕಿರೀಟ ಸಮತೆಯ ಪಾಲಿಸೋಣ  ಶುಭವಾಗಲಿ ಮಿತ್ರರೇ...🙏



Sunday, May 19, 2024

ಮನೆಯಂತರಾಳದಲಿ..



ಮನೆಯೆಂಬುದು
ಮನದೊಳಗಿನ ಭಾವನೆಗಳನು
ಮತ್ಸರವಿಲ್ಲದೆ ಪಾಲಿಸಲು ಅವಕಾಶವಿರುವ
ಮಧುರ ಬಾಂಧವ್ಯಗಳ ಸಮ್ಮಿಲನದಲಿ ನಲಿಯುವ
ಮೌಲ್ಯಯುತ ದೇವಸ್ಥಾನ ಎಂಬುದ್ದನ್ನು ಮರೆತು...
ಒಂದೆಡೆ ಮೂಲೆಯಲ್ಲೆಲ್ಲೋ
ಒಂದಿಷ್ಟು ಅಲಂಕಾರಗಳೊಂದಿಗೆ
ದೇವರುಗಳನ್ನು ಜೋಡಿಸಿಟ್ಟು ಕೈಮುಗಿಯುತ್ತೇವೆ!
ಮನೆಯ ನಿಜವಾದ ಪಾವಿತ್ರ್ಯತೆಯನ್ನರಿತಾಗ
ಸಂಸಾರ.... ಸಮಾಜ.... ಸಂವತ್ಸರಗಳಲ್ಲಿ
ಧನ್ಯತೆ ಪಡೆದು ಮಾನವೀಯ ಸತ್ಯ
ದರುಶನಕೆ ನಮ್ಮ ಈ ಬದುಕು ಸಾಕ್ಷಿಯಾಗಬಲ್ಲದು!!!!


Saturday, May 11, 2024

ನಯನಾಕರ್ಷಣೆ

 



ಕಣ್ಣೀರು ಪ್ರತಿಯೊಂದು
ಭಾವನೆಗಳಿಗೂ ಸಾಕ್ಷಿ...

ಕಣ್ಣಿನ ರೆಪ್ಪೆಗಳು ಪ್ರತಿ
ಅನಿಸಿಕೆಗಳಿಗೂ ಸ್ಪಂದನ...
ಕಣ್ಣ ನೋಟಗಳು ಪ್ರತಿ
ಕ್ಷಣಗಳಿಗೂ ಚೇತನ...
ನಯನಗಳ ಸಮ್ಮಿಲನದಲಿ
ಪ್ರೇಮಿಗಳಿಗಾರ್ಷಣೆ..
ನೇತ್ರಗಳ ಚುಂಬಕದ ಕರೆಗಳಲಿ
ರಸಿಕರಿಗಾರ್ಷಣೆ...
ಒಲವಿನಲಿ ಸಂಗಮಿಸುವ ಇಡೀ ಜೀವರಾಶಿಗಳಿಗೆ
ಒಮ್ಮನಸ್ಸಿನ ಕುಡಿನೋಟದಲೇ ಮೈಮನ ಸಂತೃಪ್ತಿ!!
ನನ್ನೆಲ್ಲವೂ ನೀನಾಗಿರುವಾಗ
ನಿನ ಕಣ್ಣ ಸೆಳೆತವೇ
ನನ್ನ ನರನಾಡಿಗಳ ಕೆಣಕಿ ಸೂಚನೆಯ ನೀಡುವ
ನೈಸರ್ಗಿಕ
ನಿಜ ಸ್ವಾದಿಸುವ ಪ್ರೇರಕ ಅನುಭೂತಿ!!!!


Friday, May 10, 2024

ಅಪ್ಪುಗೆಯ ಲತೆ









ಅವಳನ್ನು ನಾನೆಂದೂ ಸಮೀಪಿಸಿರಲಿಲ್ಲ...
ಅವಳಿಗೆ ನಾನೆಂದೂ ಹತ್ತಿರವಾದದ್ದಿಲ್ಲ...
ಅವಳಲ್ಲಿ ನಾನೆಂದೂ ಪ್ರೀತಿ ಕಂಡಿರಲಿಲ್ಲ...
ಅವಳೊಂದಿಗೆ ನಾನೆಂದೂ ಬಾಳಬೇಕೆಂದಿರಲಿಲ್ಲ..
ಆದರೆ,
ಎಂದೋ ಒಂದು ದಿನ ಅವಳನ್ನು ಕಂಡಾಗಿನಿಂದ
ಎನ್ನೊಳಗಿನ ಏನೋ ಒಂದು ಸೆಳೆತದಾರಂಭವಾಯ್ತು..
ಎಲ್ಲಿರುವಳು, ಹೇಗಿರುವಳು, ಏನಾಗಿರುವಳು
ಏನನು ಅರಿಯದ ನನ್ನೀ ಹೃದಯ ತುಡಿಯುತ್ತಿತ್ತು..
ಹಂಬಲಿಸುತ್ತಿತ್ತು ಪ್ರತಿಕ್ಷಣವೂ ಅವಳ ಕಾಣಲು...
ಒಮ್ಮೆ ಅವಳು ಕಂಡಳು ಸಾಮಾಜಿಕ ತಾಣದಲಿ...
ಒಬ್ಬರಿಗೊಬ್ಬರೂ ಕೇಳಿಕೊಂಡೆವು....
ಒಲವೋ ಗೆಲುವೋ ನನ್ನ ಕರೆದಳು
ಒಂದೇ ಒಂದು ಅಪ್ಪುಗೆಗಾಗಿ...
ಕಾಡಿಸಿ ಪೀಡಿಸಿ ಅವಳ ಕರೆಗೆ ಸ್ಪಂದಿಸಿದಾಗ
ಕೊಟ್ಟ ಒಂದೇ ಒಂದು ಅಪ್ಪುಗೆ ಜೀವವನ್ನಾವರಿಸಿತು..
ಕಳೆದೆವು, ಬೆರೆತೆವು, ನಕ್ಕು ನಲಿದೆವು ಮೈಮರೆತು... ವಿಷ ಗಳಿಗೆ ಅನುಮಾನದ ಸುಳಿ ಕಿಡಿಯಾಯಿತು...
ಮನಸ್ಸು ಹೃದಯಗಳು ಜೊತೆಯಾಗಿದ್ದರೂ
ದೇಹಗಳು ದೂರದಲಿ ಮರೆಯಾಯಿತು...
ಅಂದು, ಅವಳೊಂದು ಅಪ್ಪುಗೆ ಸಾಂತ್ವನ ಬಯಸಿದಳು...
ಇಂದು, ನಾನು ಬೇರ್ಪಟ್ಟ ವೇದನೆಯ ಕಣ್ಣೀರನ್ನಳಿಸಲು
ಒಂದೇ ಒಂದು ಅಪ್ಪುಗೆ ಬಯಸಿ ಕಾದಿರುವೆ.....!!!!!


Wednesday, May 8, 2024

ಮನದಾಳದ ಕಥನ



ಕಥೆಗಳಿಗೇನಿವೆ ಕೊರತೆಯಿಲ್ಲಿ???
ಕರಗುತ್ತಿರುವ ಕಾಡಿಸುವ ಕನವರಿಸುವ ಕನಸುಗಳ
ಒಂದೊಂದು ಘಟನೆಗಳಾರಂಭ
ಒಂದಷ್ಟು ಮುಗಿಯದ
ಒಂದೊಂದು ಮುಗಿದ ಬದುಕಿನ ಕಥನ
ಒಂದೊಂದು ಕ್ಷಣಗಳಲೂ ಮನಸ್ಸಿನಾಳೆಯ
ಓದಿಸಿಕೊಂಡೊಯ್ಯುತ ಮಿಡಿಯುವ ಪದಗಳಾಗಿವೆ.
ತೀರದ ಪುಟಗಳಿನ್ನೂ ಖಾಲಿಯಿವೆ...
ತೀಡುವ ಲೇಖನಿಗಳಲ್ಲಿನ್ನೂ ಶಾಹಿಯಿದೆ....
ಹೃದಯಲ್ಲಿದ್ದು ಮನದಾಳದ ಪುಸ್ತಕವನ್ನೋದುವ
ಹೊನಲಿನ ಬದುಕಿನ ದೋಣಿಯಲಿ ಪಯಣಿಸುವ
ಜೀವವೊಂದು ಬೇಕಾಗಿದೆ!
ಜನ್ಮಾಂತರಗಳೊಂದಿಗೆ ಜೊತೆಗಿದ್ದು
ಸಹನೆಯಿಂದಾಲಿಸುತ ನೂರಾರು ಕಥೆಗಳಿಗೆ
ಸ್ಪಂದಿಸುವ ಸಂಗಾತಿಯ ಮಧುರತೆ ಅಗತ್ಯವಿದೆ!!!!






ಇಳೆಯ ಜೀವ!

 




ನಶ್ವರವೆನಿಸುವ ನಶ್ವರಲ್ಲದ 
ನಲ್ಮೆಯ ಆತ್ಮಗಳನ್ನಾವರಿಸಿರುವ
ಜಗತ್ತಿದು...
ಲಕ್ಷಾಂತರ ವರುಷಗಳಿಂದಾಚೆಯಿಂದಲಿ
ಕೋಟ್ಯಾನು ವರ್ಷಗಳಿಂದಾಚೆಯಲಿನ ಬದುಕಿನತ್ತ
ಕನಸುಗಳನ್ನ್ಹೊತ್ತು ಸಾಗುತ್ತಿರುವ
ವಿನಾಶವಾಗುವ ಶರೀರಗಳು ತುಂಬಿರುವ
ನೆಲೆಯಿದು.
ಕಲ್ಪನಾ ಮನಸ್ಸುಗಳ ಬಯಕೆಗಳ ಹುಡುಕಿ
ಕಾಣದ ಆತ್ಮಸ್ವರೂಪಿ ಪರಮಾತ್ಮನೊಂದಿಗೆ
ಕೊನೆಗಾಣದ ಬದಕನು ಬಾಳಲು ಬಯಸಿ
ಕೊರತೆಗಳಲು ಒರತೆಗಳಂತರದ ತೃಪ್ತಿಯಲಿರುವ
ಸ್ಥಳವಿದು.
ಇರುವಷ್ಟು ಕಾಲ ನೆಮ್ಮದಿಯ ಹಂಬಲಿಕೆಯಲಿ
ಇರುವುದ್ದೆಲ್ಲದರಲಿ ತಾನಿರಬೇಕೆಂಬ ಇಚ್ಚೆಯಲಿ
ಇಂದ್ರಿಯಗಳನು ಪಂಚಭೂತಗಳಲಿ ಹೊಂದಿಸಿಕೊಂಡ
ನಶ್ವರವೆನುವುದ ಬದಿಗಿಟ್ಟು ನಲಿಯುವ
ನರಮಾನವರು ತುಂಬಿರುವ
ಇಳೆಯಿದು.



Tuesday, May 7, 2024

ನಾನೆಂಬ ನಿಸ್ವಾರ್ಥ












ಸಾರ್ಥಕತೆಗೆ ಸಾಕ್ಷಿ ನಾನೇ...                             
ನಿರರ್ಥತೆಗೆ  ನಿರೂಪಣೆ ನಾನೇ...
ಚಂದದ ಅನುಭವದ ಆಲಿಂಗನ ನಾನೇ...
ಕರಗುವ ಕರಗಿಸೊ ಕರತಡಗಳು ನಾನೇ...
ಸತ್ಯ ಅಸತ್ಯಗಳ‌ ಸೂಕ್ಷತೆಗಳೂ ನಾನೇ...
ಅಳಿವು ಉಳಿವುಗಳ ಸಾಧಕನೂ ನಾನೇ..
ಬಾಹ್ಯ, ಅಂತರಂಗಗಳ ಮಿಡಿತಗಳೂ ನಾನೇ...
ನಾನಿದ್ದರೇನೇ ನನ್ನೀ ಲೋಕ..
ನಾನಿದ್ದರೇನೇ ನನ್ನೀ ಸೋಲು ಗೆಲುವು..
ನಾನಿದ್ದರೇನೆ  ನನ್ನೀ  ಕತ್ತಲು ಬೆಳಕು..
ಅರ್ಥವಾಗಲಿಲ್ಲವೇ??
ನೀವಿಲ್ಲದ ಜಗತ್ತನ್ನೂ ನೀವು ಊಹಿಸಬಲ್ಲಿರ!!??                ನಾನು ಸಾಧಿಸಬಲ್ಲೆ  ಎಂಬ ನಾನು ಎಂಬ ವ್ಯಕ್ತಿಯ              ಸಾಧನೆ, ಭೋದನೆ, ಸಂಶೋಧನೆ, ಆವಿಷ್ಕಾರ, ಸಂಸ್ಕರಣಗಳೇ ಸಾಮಾಜಿಕ ಬದಲಾವಣೆಯ ನಾಮದೇಯದ ಪ್ರತೀಕ! 
ಮೇಣ ಅಂದರೆ ಮರಣ!!               
ಉರಿದುರಿದು ಜಗಕೆ ಜ್ಯೋತಿಯನ್ನೀಡಿ ಕತ್ತಲಲಿ ಮರೆಯಾಗುವ ಉಳಿಯಲಾರದ್ದು!!!
ಉರಿಯುತ್ತಿದದ್ದು ಯಾರೂ ಎಂದು ಪ್ರಶ್ನಿಸದ ಜಗತ್ತಿದು.
ಉರಿಯಬೇಡ ಅರಿವಿಲ್ಲದ ಅರವಳಿಕೆಯಲಿ !
ಹುರಿಯಾಗಿರು.....                                                          ಹೃನ್ಮನಗಳ ಬೆಸೆಯಲು ನೀನೇನೀನಾಗಿ!                            ನನ್ನನುಭವಗಳ ನಿಸ್ವಾರ್ಥತೆಯ ಪದಗಳಿವು!! 


Sunday, May 5, 2024

ಪಯಣ....ಪ್ರಶ್ನಾರ್ಥಕ!

 



ಎಲ್ಲಿಗೆ ಈ ಬದುಕಿನ ಪಯಣ!!!??
ಎತ್ತ ಕಡೆ ಸಾಗುತ್ತಿದೆ ನಮ್ಮ ದಾರಿ!!?
ತಿಳಿದಿದ್ದರೆ
ತಿಳಿಸಿ...
ಏನೋ ಕೇಳುತ್ತೇವೆ...
ಏನನ್ನೋ ಹೇಳುತ್ತಿರುತ್ತೇವೆ...
ಎಲ್ಲವೂ ನಮ್ಮ ಅನುಭವದ್ದಲ್ಲ...!
ಏನನ್ನರಿತ್ತಿರದ ಮತ್ತೊಬ್ಬರದ್ದನ್ನು ನೋಡಿ, ಕೇಳಿ?!
ನಮ್ಮತನವೆಲ್ಲಿದೆ!!?
ನಮ್ಮಿಂದೇನಾಗುತ್ತಿದೆ??
ನಮಗೇಯರಿವಿಲ್ಲದೆ ನಾವಿದ್ದೇವೆ...
ಏಳುತ್ತೇವೆ.... ದುಡಿಯುತ್ತೇವೆ..!?.... ಮಲಗುತ್ತೇವೆ...

ದಿನಗಳು ಓಡುತ್ತಿರಲು..
ಚೈತನ್ಯ ಕುಂದುತ್ತಿರಲೂ..
ವರ್ಷಕ್ಕೊಂದು ದಿನ ಊದುತ್ತೇವೆ...
ಹುಟ್ಟಿದ ದಿನ ಇದೆಂದು!!!
ಪಯಣ ಪ್ರಶ್ವಾರ್ಥಕ!!!







: ಕವನ್ರಾಗ್

Thursday, May 2, 2024

ರಾಜಕೀಯ ಮಹತ್ವ

'ರಾಜಕೀಯ


ರಾಜರ ಸ್ಥಾನದಲ್ಲಿ
ನಸಾಮಾನ್ಯರು
ಕೀರ್ತಿವಂತರಾಗಿ
ಶಸ್ಸಿನೆಡೆಗೆ


ರಾಷ್ಟ್ರ, ರಾಜ್ಯ, ಜಿಲ್ಲಾ, ಗ್ರಾಮ, ಕ್ಷೇತ್ರ, ಸಮಾಜವನ್ನು
ಪ್ರಗತಿಯತ್ತ ಕೊಂಡ್ಯೊಯ್ಯುವ 
ಪ್ರಾಮಾಣಿಕ ಸೇವಾ ಮಾನುಷ ಗುಣಗಳ 
ಪರಿಶುದ್ಧವಾದ ನಾಯಕರುಗಳನ್ನು
ಪರಿಪೂರ್ಣವಾಗಿ ಹೊಂದಿಸಿಕೊಂಡ 
ಪ್ರಗತಿಪರ ಮೇರುಸ್ಥಾನ!
ಸ್ವಾರ್ಥ : ಮೋಹ : ಹಣ ಅಧಿಕಾರಗಳನ್ನು ಹಿಮ್ಮೆಟ್ಟಿಸಿ
ಜನ್ಮತಾಳಿದ ಗರ್ಭದ ಸತ್ಯಕ್ಕೆ ಸಾಕ್ಷಿಯನು
ಪ್ರತ್ಯಕ್ಷಗೊಳಿಸುವ ಮಹಾಭಾಗ್ಯಶಾಲಿಯಾದ 
ಪಂಚೇಂದ್ರಿಯ ತಹಬದಿಗಿಡುವ ನಿಜವಾದ ಗತ್ತು. 
ಕೆಳಮಟ್ಟನೆನಿಸಿಕೊಳ್ಳುವ ಒಬ್ಬ ಸಾಮಾನ್ಯ
ಕನಿಷ್ಠ ವ್ಯಕ್ತಿಯೆದುರು ಕೈಚಾಚಿ ನಮಸ್ಕರಿಸಿ
'ಮತ' ಎಂಬ ಮೆಟ್ಟಿಲ ಮೇಲೇರಿ ಜಯಗಳಿಸಿ
ಮೌಲ್ಯಯುತ ಆಡಳಿತ ನಡೆಸುವ 
ಮಹತ್ವವಾದ ‌ಮೇರು ಸ್ಥಾನ!
ಲಕ್ಷಾಂತರ ನಂಬಿಕೆಗಳಿಗೆ ದ್ರೋಹವೆಸಗಿದರೆ ಮುಂದಿನ ವಂಶದ ಶಾಪಕ್ಕೆ ಗುರಿಯಾಗುವ ಅನುಭವಗಳಿಗೆ ಸಾಕ್ಷಿಯಾಗಿದೆ ಈ ಜಗತ್ತು!!!
ಅರ್ಥೈಸಿಕೊಂಡರೆ ಅರಿವು ; 
ಅಪಚಾರವೆಸಗಿದರೆ ಅವನತಿ. 

: ಕವನ್ರಾಗ್, ಮೈಸೂರು

ಯಂತ್ರ ಸುಂದರಿ

 




ಮೃದುಲ ಭಾವಗಳ ಯಂತ್ರ ಸುಂದರಿ...
ಕ್ರೂರ ಭಾವಗಳ ಯಂತ್ರ ಸುಂದರಿ...
ಸ್ವಾರ್ಥ ಹೋರಾಟ ಭಾವಗಳ ಯಂತ್ರ ಸುಂದರಿ..
ಕಿಡಿಗಳಿಂದಾವೃತವಾದ ಮಂದಸ್ಮಿತ ಯಂತ್ರ ಸುಂದರಿ..
ಮಮತೆಯ ಸುಮಧುರ ಭಾವಗಳ ಯಂತ್ರ ಸುಂದರಿ...
ದ್ವೇಷ ರೋಷ ಭಾವಗಳ ಯಂತ್ರ ಸುಂದರಿ...
ತಾಯ್ತನದ ಮಮತಾಭಾವಗಳ ಯಂತ್ರ ಸುಂದರಿ...
ಪ್ರೀತಿಯ ಸಂಪೂರ್ಣ ಭಾವಗಳ ಯಂತ್ರ  ಸುಂದರಿ...
ನಾಗರಿಕ ಅನಾಗರಿಕ ಸ್ತವರ ಭಾವ ಯಂತ್ರ ಸುಂದರಿ‌...
ಉಸಿರಿಗುಸಿರು ಪ್ರೇಮ ಭಾವದ ಯಂತ್ರ ಸುಂದರಿ...
ಅವರ್ಬಿಟ್ ಇವರ್ಬಿಟ್ ಇನ್ಯಾರೆಂಬ ಯಂತ್ರ ಸುಂದರಿ...
ಸುಸಂಸ್ಕೃತಿಗೆ ಮಾರಕ ಭಾವಗಳ ಯಂತ್ರ ಸುಂದರಿ....
ಸುಂದರಿಯೆಂದಾಕ್ಷಣ ಭಾವಗಳೆಲ್ಲವೂ ಒಂದೇಯಲ್ಲ!!
.... ಇನ್ನೂ ನಿಮ್ಮನಿಮ್ಮ ಭಾವನೆಗಳಿಗೆ...
ಅಪ್ಪಿಕೊಳ್ಳುವಾಗ ಒಂದಿಷ್ಟು ಜಾಗರೂಕತೆಯಿರಲಿ!!

: ಕವನ್ರಾಗ್




Wednesday, May 1, 2024

ಮಾತ್ರಿಕೆಯ ಗರ್ಭ

ತಾಯಗರ್ಭ

ಸಾಟಿಯಿಲ್ಲಸ ಆಗರ್ಭ ಶ್ರೀಮಂತಿಕೆಯ
ಭವ್ಯ ದೇಗುಲ!
ಸರ್ವಕೋಟಿ ದೇವರುಗಳು ನೆಲೆಸ ಬಯಸುವ
ಧನ್ಯತೆಯ ಗುಡಿ!
ಸಂಪೂರ್ಣತೆ ಮಮತೆಯಾಲಿಂಗನದ
ಸುಂದರ ದೇವಾಲಯ!
ಸಹನೆಯ ಉತ್ತುಂಗದಲಿ ರಾರಾಜಿಪ
ಆಂತರ್ಯ ನೆಲೆ!
ಸ್ವಲ್ಪವೂ ಕೊರತೆಯನ್ನಿರಿಸದ ಸಂತೃಪ್ತಿ
ಭವ್ಯ ಸೂರು!
ಸಕಲ ನೆಮ್ಮದಿಯಲಿ ಸದಾ ನಗುವನ್ನಿರಿಸುವ
ದಿವ್ಯ ಸಾನಿಧ್ಯ!
ಸೋಲು ಕೊರತೆ ವೇದನೆಗಳಿಲ್ಲದ ಚಂದದ
ಪುಟ್ಟ ಮನೆ!
ಬೆಚ್ಚನೆಗೂ ಚಳಿಗೂ ಮಾಧುರ್ಯದ
ಬೆಳಕಿನ ಅರಮನೆ!
ಮಾತೃ ಗರ್ಭದೊಳಗಿನ ಆ ನವ ಮಾಸಗಳು
ಮೈಮನಾಂತರ್ಯಗಳ ದೈವತ್ವದ
ಸ್ವರ್ಗೀಯ ಸನ್ನಿಧಿ!!!


: ಕವನ್ರಾಗ್, ಮೈಸೂರು


ನಿಲ್ಲದ ಬದುಕು

  ಆಲೋಚನೆ ಯೋಚನೆಗಳಿಂದಲೇ ಆಚಾರ ವಿಚಾರಗಳ ಚಿಂತನೆಗಳಿಂದಲೇ ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು. ನಿಖರತೆಯಿಲ್ಲದ ಸಂಬಂಧಗಳಿಂದಾಗಿ ನಿಲುಮೆಗಳಿಲ್ಲದ ಸಹವಾಸಗಳಿಂದ...