ಸಮೃದ್ಧಿಯ ಸೂಚಕ ಸಂಬಂಧಗಳ ಸಮತೆ
ಸೌಜನ್ಯದ ಸೂಚಕ ಸದ್ಗುಣಗಳ ಸಮತೆ
ಸಂತೋಷದ ಸೂಚಕ ಸರಳತೆಯ ಸಮತೆ
ಸ್ವಾತಂತ್ರ್ಯದ ಸೂಚಕ ಸಾನಿಧ್ಯದ ಸಮತೆ
ಸಮತೆ ಇರುವಲ್ಲಿ ಪ್ರೀತಿ ಖಚಿತ
ಸಮತೆ ಬೆಳಗುವಲ್ಲಿ ನೆಮ್ಮದಿ ಖಚಿತ
ಸಮತೆ ತುಂಬಿರುವಲ್ಲಿ ಏಳಿಗೆ ಖಚಿತ
ಸಮತೆ ನೆಲೆಸಿರುವಲ್ಲಿ ಆನಂದ ಖಚಿತ
ನೋವು ಇರುವಾಗ ಸಮಾನತೆ ಸಿಗುವುದೇ?
ಕಷ್ಡಗಳು ಇರುವಾಗ ಸಮಾನತೆ ಕಾಣುವುದೇ?
ದ್ವೇಷಗಳು ಇರುವಾಗ ಸಮಾನತೆ ಬರುವುದೇ?
ಹಗೆತನ ಇರುವಾಗ ಸಮಾನತೆ ಉಳಿವುದೇ?
ಸಮಾನರು ನಾವು ಎನುವುದು ಹೃದಯದಲ್ಲಿರಬೇಕು
ಸಮಾನರು ನಾವು ಎನುವುದು ನಡತೆಯಲ್ಲಿರಬೇಕು
ಸಮಾನರು ನಾವು ಎನುವುದು ವ್ಯಕ್ತಿತ್ವದಲ್ಲಿರಬೇಕು
ಜಾತಿ - ಅಧಿಕಾರ - ಸಿರಿವಂತಿಕೆ - ವಿದ್ಯಾರ್ಹತೆ
ಎಲ್ಲವ ಮೆಟ್ಟಿ ಸಮಾನರು ನಾವು ಎನುವುದು
ಮಾನುಷ ಗುಣವಂತವನ ಹಿರಿಮೆಯ ಕಿರೀಟ ಸಮತೆಯ ಪಾಲಿಸೋಣ ಶುಭವಾಗಲಿ ಮಿತ್ರರೇ...🙏
No comments:
Post a Comment