Friday, May 10, 2024

ಅಪ್ಪುಗೆಯ ಲತೆ









ಅವಳನ್ನು ನಾನೆಂದೂ ಸಮೀಪಿಸಿರಲಿಲ್ಲ...
ಅವಳಿಗೆ ನಾನೆಂದೂ ಹತ್ತಿರವಾದದ್ದಿಲ್ಲ...
ಅವಳಲ್ಲಿ ನಾನೆಂದೂ ಪ್ರೀತಿ ಕಂಡಿರಲಿಲ್ಲ...
ಅವಳೊಂದಿಗೆ ನಾನೆಂದೂ ಬಾಳಬೇಕೆಂದಿರಲಿಲ್ಲ..
ಆದರೆ,
ಎಂದೋ ಒಂದು ದಿನ ಅವಳನ್ನು ಕಂಡಾಗಿನಿಂದ
ಎನ್ನೊಳಗಿನ ಏನೋ ಒಂದು ಸೆಳೆತದಾರಂಭವಾಯ್ತು..
ಎಲ್ಲಿರುವಳು, ಹೇಗಿರುವಳು, ಏನಾಗಿರುವಳು
ಏನನು ಅರಿಯದ ನನ್ನೀ ಹೃದಯ ತುಡಿಯುತ್ತಿತ್ತು..
ಹಂಬಲಿಸುತ್ತಿತ್ತು ಪ್ರತಿಕ್ಷಣವೂ ಅವಳ ಕಾಣಲು...
ಒಮ್ಮೆ ಅವಳು ಕಂಡಳು ಸಾಮಾಜಿಕ ತಾಣದಲಿ...
ಒಬ್ಬರಿಗೊಬ್ಬರೂ ಕೇಳಿಕೊಂಡೆವು....
ಒಲವೋ ಗೆಲುವೋ ನನ್ನ ಕರೆದಳು
ಒಂದೇ ಒಂದು ಅಪ್ಪುಗೆಗಾಗಿ...
ಕಾಡಿಸಿ ಪೀಡಿಸಿ ಅವಳ ಕರೆಗೆ ಸ್ಪಂದಿಸಿದಾಗ
ಕೊಟ್ಟ ಒಂದೇ ಒಂದು ಅಪ್ಪುಗೆ ಜೀವವನ್ನಾವರಿಸಿತು..
ಕಳೆದೆವು, ಬೆರೆತೆವು, ನಕ್ಕು ನಲಿದೆವು ಮೈಮರೆತು... ವಿಷ ಗಳಿಗೆ ಅನುಮಾನದ ಸುಳಿ ಕಿಡಿಯಾಯಿತು...
ಮನಸ್ಸು ಹೃದಯಗಳು ಜೊತೆಯಾಗಿದ್ದರೂ
ದೇಹಗಳು ದೂರದಲಿ ಮರೆಯಾಯಿತು...
ಅಂದು, ಅವಳೊಂದು ಅಪ್ಪುಗೆ ಸಾಂತ್ವನ ಬಯಸಿದಳು...
ಇಂದು, ನಾನು ಬೇರ್ಪಟ್ಟ ವೇದನೆಯ ಕಣ್ಣೀರನ್ನಳಿಸಲು
ಒಂದೇ ಒಂದು ಅಪ್ಪುಗೆ ಬಯಸಿ ಕಾದಿರುವೆ.....!!!!!


No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...