ನಶ್ವರವೆನಿಸುವ ನಶ್ವರಲ್ಲದ
ನಲ್ಮೆಯ ಆತ್ಮಗಳನ್ನಾವರಿಸಿರುವ
ಜಗತ್ತಿದು...
ಲಕ್ಷಾಂತರ ವರುಷಗಳಿಂದಾಚೆಯಿಂದಲಿ
ಕೋಟ್ಯಾನು ವರ್ಷಗಳಿಂದಾಚೆಯಲಿನ ಬದುಕಿನತ್ತ
ಕನಸುಗಳನ್ನ್ಹೊತ್ತು ಸಾಗುತ್ತಿರುವ
ವಿನಾಶವಾಗುವ ಶರೀರಗಳು ತುಂಬಿರುವ
ನೆಲೆಯಿದು.
ಕಲ್ಪನಾ ಮನಸ್ಸುಗಳ ಬಯಕೆಗಳ ಹುಡುಕಿ
ಕಾಣದ ಆತ್ಮಸ್ವರೂಪಿ ಪರಮಾತ್ಮನೊಂದಿಗೆ
ಕೊನೆಗಾಣದ ಬದಕನು ಬಾಳಲು ಬಯಸಿ
ಕೊರತೆಗಳಲು ಒರತೆಗಳಂತರದ ತೃಪ್ತಿಯಲಿರುವ
ಸ್ಥಳವಿದು.
ಇರುವಷ್ಟು ಕಾಲ ನೆಮ್ಮದಿಯ ಹಂಬಲಿಕೆಯಲಿ
ಇರುವುದ್ದೆಲ್ಲದರಲಿ ತಾನಿರಬೇಕೆಂಬ ಇಚ್ಚೆಯಲಿ
ಇಂದ್ರಿಯಗಳನು ಪಂಚಭೂತಗಳಲಿ ಹೊಂದಿಸಿಕೊಂಡ
ನಶ್ವರವೆನುವುದ ಬದಿಗಿಟ್ಟು ನಲಿಯುವ
ನರಮಾನವರು ತುಂಬಿರುವ
ಇಳೆಯಿದು.
No comments:
Post a Comment