ಕಣ್ಣೀರು ಪ್ರತಿಯೊಂದು
ಭಾವನೆಗಳಿಗೂ ಸಾಕ್ಷಿ...
ಕಣ್ಣಿನ ರೆಪ್ಪೆಗಳು ಪ್ರತಿ
ಅನಿಸಿಕೆಗಳಿಗೂ ಸ್ಪಂದನ...
ಕಣ್ಣ ನೋಟಗಳು ಪ್ರತಿ
ಕ್ಷಣಗಳಿಗೂ ಚೇತನ...
ನಯನಗಳ ಸಮ್ಮಿಲನದಲಿ
ಪ್ರೇಮಿಗಳಿಗಾರ್ಷಣೆ..
ನೇತ್ರಗಳ ಚುಂಬಕದ ಕರೆಗಳಲಿ
ರಸಿಕರಿಗಾರ್ಷಣೆ...
ಒಲವಿನಲಿ ಸಂಗಮಿಸುವ ಇಡೀ ಜೀವರಾಶಿಗಳಿಗೆ
ಒಮ್ಮನಸ್ಸಿನ ಕುಡಿನೋಟದಲೇ ಮೈಮನ ಸಂತೃಪ್ತಿ!!
ನನ್ನೆಲ್ಲವೂ ನೀನಾಗಿರುವಾಗ
ನಿನ ಕಣ್ಣ ಸೆಳೆತವೇ
ನನ್ನ ನರನಾಡಿಗಳ ಕೆಣಕಿ ಸೂಚನೆಯ ನೀಡುವ
ನೈಸರ್ಗಿಕ
ನಿಜ ಸ್ವಾದಿಸುವ ಪ್ರೇರಕ ಅನುಭೂತಿ!!!!
No comments:
Post a Comment