ಮೃದುಲ ಭಾವಗಳ ಯಂತ್ರ ಸುಂದರಿ...
ಕ್ರೂರ ಭಾವಗಳ ಯಂತ್ರ ಸುಂದರಿ...
ಸ್ವಾರ್ಥ ಹೋರಾಟ ಭಾವಗಳ ಯಂತ್ರ ಸುಂದರಿ..
ಕಿಡಿಗಳಿಂದಾವೃತವಾದ ಮಂದಸ್ಮಿತ ಯಂತ್ರ ಸುಂದರಿ..
ಮಮತೆಯ ಸುಮಧುರ ಭಾವಗಳ ಯಂತ್ರ ಸುಂದರಿ...
ದ್ವೇಷ ರೋಷ ಭಾವಗಳ ಯಂತ್ರ ಸುಂದರಿ...
ತಾಯ್ತನದ ಮಮತಾಭಾವಗಳ ಯಂತ್ರ ಸುಂದರಿ...
ಪ್ರೀತಿಯ ಸಂಪೂರ್ಣ ಭಾವಗಳ ಯಂತ್ರ ಸುಂದರಿ...
ನಾಗರಿಕ ಅನಾಗರಿಕ ಸ್ತವರ ಭಾವ ಯಂತ್ರ ಸುಂದರಿ...
ಉಸಿರಿಗುಸಿರು ಪ್ರೇಮ ಭಾವದ ಯಂತ್ರ ಸುಂದರಿ...
ಅವರ್ಬಿಟ್ ಇವರ್ಬಿಟ್ ಇನ್ಯಾರೆಂಬ ಯಂತ್ರ ಸುಂದರಿ...
ಸುಸಂಸ್ಕೃತಿಗೆ ಮಾರಕ ಭಾವಗಳ ಯಂತ್ರ ಸುಂದರಿ....
ಸುಂದರಿಯೆಂದಾಕ್ಷಣ ಭಾವಗಳೆಲ್ಲವೂ ಒಂದೇಯಲ್ಲ!!
.... ಇನ್ನೂ ನಿಮ್ಮನಿಮ್ಮ ಭಾವನೆಗಳಿಗೆ...
ಅಪ್ಪಿಕೊಳ್ಳುವಾಗ ಒಂದಿಷ್ಟು ಜಾಗರೂಕತೆಯಿರಲಿ!!
: ಕವನ್ರಾಗ್
No comments:
Post a Comment