Monday, April 29, 2024

ಪ್ರಕೃತಿಯಪ್ಪುಗೆಯಲಿ!


ಪ್ರಕೃತಿಯಪ್ಪುಗೆಯಲಿ....









ಕಣ್ತುಂಬಿಕೊಳ್ಳುವ ಸೌಂಧರ್ಯ...
ಮನದುಂಬಿಕೊಳ್ಳುವ ಮಾಧರ್ಯ...
ಹೃದಯವನ್ನಪ್ಪಿಕೊಳ್ಳುವ ಆಂತರ್ಯ...
ದೇಹವನ್ನೊಪ್ಪಿಕೊಳ್ಳುವ ಸೌಕರ್ಯ...
ಬದುಕನ್ನೊಳಗೊಳ್ಳುವ ಆಶ್ಚರ್ಯ....
ಎಲ್ಲವೂ ನೀನಾಗಿರುವಾಗ
ಎಂದೆಂದೂ ನಿನನ್ನೋಡುತ್ತಲೇ
ಎಲ್ಲವನೂ ಮರೆತು ನಿನ್ನೊಡನ್ನೊಂದಾಗಿ
ಸವಿಸವಿಯುತಾ
ದಿನಕಳೆಯುತಾ
ಇದ್ದುಬಿಡುವೆನು ನಾ
ಪ್ರಕೃತಿ ಚುಂಬಕ ಚೆಲುವೆಯೇ!!!
ಪಂಚೇಂದ್ರೀಯಗಳು
ಪಂಚಭೂತಗಳು
ಪರಿಪೂರ್ಣತೆಯೇ ನಿನ್ನ-ನನ್ನ ಸಂಗಮದಲ್ಲವೇ?
ಪರಿಶುದ್ಧತೆಯ ಸಂತೃಪ್ತಿಯೇ ನೀನಲ್ಲವೇ!!!!!!!!!?

ಕವನ್ರಾಗ್....





Sunday, April 28, 2024

ಭಯದ ಅರ್ಥ ‌ನಿಶ್ಚಿತದ ಕೊರತೆ

 ಭಯದ ಅರ್ಥ ‌ನಿಶ್ಚಿತದ ಕೊರತೆ

ದೇವರಿಗೆ ವಿರುದ್ಧವಾಗಿ ನಡೆದರೆ ನರಕ‌ : ಭಯ
ಸೈತಾನನಿಗೆ ಹೊಂದಿಕೊಳ್ಳದಿರೆ ಸಂಕಟ : ಭಯ
ಕರ್ತವ್ಯ ಪಾಲಿಸದಿದ್ದರೆ ಶಿಕ್ಷೆ : ಭಯ
ಅನ್ಯಾಯ ಮಾಡಿದರೆ ದಂಡನೆ : ಭಯ
ಪರೀಕ್ಷೆಯಲ್ಲಿ ಮರೆವಿನ ಪರಿಣಾಮ : ಭಯ
ತನ್ನಿಚ್ಛೆಯಂತೆ ಇರಬೇಕೆಂದರೆ‌ : ಭಯ
ಆರೋಗ್ಯದ ಏರಿಳಿತದಲಿ : ಭಯ
ನೀತಿನಿಯಮಗಳ ಪಾಲಿಸದಿದ್ದರೆ : ಭಯ
ಪ್ರಕೃತಿ ವಿಕೋಪಗಳ : ಭಯ
ನಾಗರಿಕತೆಯ ತೀವ್ರತೆಯ : ಭಯ
ಭಯ ಭಯ ಭಯ ಭಯ...
ಭೂತಕಾಲದ.. 
ವರ್ತಮಾನ ಕಾಲ... 
ಭವಿಷ್ಯತ್ ಕಾಲ.. 
ಈ ದಿನಗಳ... ಮುಂದಿನ ದಿನಗಳ.. ಎಲ್ಲದರಲೂ.... ‌‌ಭಯ...
ಭಯವಿಲ್ಲದವನೂ,
ಅಜ್ಞಾನಿಯಾಗಿದ್ದರೂ ಬೋಧಿಸಬಲ್ಲ!
ಅತೃಪ್ತನಾಗಿದ್ದರೂ ಸಂತೋಷಪಡಿಸಬಲ್ಲ!
ಅತಂತ್ರನಾಗಿದ್ದರೂ ಆದರ್ಶನಾಗಬಲ್ಲ!
ಅಸೂಯೆಯುಳ್ಳವನಾಗಿದ್ದರೂ ಅನುಸರಿಸಬಲ್ಲ!
....... ಏಕೆಂದರೆ, ಇಂತವರಲ್ಲಿ ಭಯ ಇರುವುದಿಲ್ಲ!!
ಭಯ ಇಲ್ಲದಿರೆ ಹಿಂಜರಿಕೆ ಇರೊಲ್ಲ...
ಹಿಂಜರಿಕೆ ಇಲ್ಲದಿರೆ ಶೂನ್ಯತೆ ಇರೊಲ್ಲ...
ಶೂನ್ಯತೆ ಇಲ್ಲದಿರೆ ಮಾನ್ಯತೆಯ ಕೊರತೆ ಇರೊಲ್ಲ..
ಕೊರತೆ ಇಲ್ಲದಿರೆ ಸಂಪೂರ್ಣತೆಗೆ ಸೋಲಿರುವುದಿಲ್ಲ!!!
ಆದ್ದರಿಂದ,
ಧೈರ್ಯಗುಂದದಿರಿ...ಹಿಂಜರಿಯದಿರಿ....
ಧನ್ಯತೆಯ ಬದುಕಿಗೆಯೆಂಬ ನಂಬಿಕೆ ಇರಲಿ!!


ನೈಜ ಪ್ರೇಮದ ನಿಜದನಿಯಿದು.


ಅನುಮಾನದ ಅವಮಾನದೊಳಗಿನ 
ಕತ್ತಲ ಕೋಣೆಯೊಳಗೆ ಪ್ರೀತಿಯ 
ನಾಟ್ಯವಾಡದೆ.. 
ನೆಚ್ಚಿಕೊಂಡ ಭಾವನೆಗಳಲಿ ತಪ್ಪನ್ನ್ಹುಡುಕಿ ಅಲ್ಪರನ್ನಾಗಿಸುವ 
ಬಿಗುವಾಗದೆ..
ಸುಡುಬಿಸಿಲಿನ ತಾಪವನು ತಂಪೆರೆವ ಜೊತೆಯೆನುತ
ನಾಟಕವಾಡದೆ...
ಸಪ್ತಸ್ವರಗಳ ಸೂಚನೆಯಲಿ ಸ್ತಬ್ದವಾಗಿಸುವ
ಕಂಠವಾಗದೆ...
ಮೈಮನಗಳ ಮಿಲನದೊಳಗೆ ಸಂಚಾಕಾರದ
ಸೂಚನೆಯಾಗದೆ...
ಕ್ಷಣಕ್ಷಣಗಳರ್ಪಣೆಯ ಸಂಗಮದಲಿ ಆತಂಕದ
ಕರಿಮೋಡವಾಗದೆ.....
ನಿರ್ಲಕ್ಷ್ಯದೊಳ ನಿರ್ನಾಮವಾಗಿಸುವ ನಿಧಿರೆಯಾಗದೆ...
ಸದಾ
'ನಿನಗಾಗಿಯೇ ನಾನು..' 'ನನಗಾಗಿಯೇ ನೀನು..' 
ಎನುವ ಸತ್ಯತೆ ಸಿಂಚನದ ಸಿಂಧುವಾಗುವುದೇ 
ನೈಜ ಪ್ರೇಮ!
ಕ್ಷೇಮದ ಕ್ಷಾಮಗಳ ಅಳತೆಗಳಿಲ್ಲದ ಅಮರ ಪ್ರೇಮ!!!

: ಒಲವು ಕವನ್ರಾಗ್, ಮೈಸೂರು :

Saturday, April 27, 2024

ನಿರ್ಗವಿಯ ನಿಲುಮೆ


ನಾಟ್ಯವಾಡುವ ನವಿಲಾಗಿ

ಹಾಡುವ ಕೋಗಿಲೆಯಾಗಿ

ಹಂಸ ನಡುಗೆಯ ಕನ್ಯೆಯಾಗಿ

ಹೊಳೆಯುವ ನಗು ಮಿಂಚಾಗಿ

ಹರಿವ ಪ್ರಶಾಂತ ಹೊನಲಾಗಿ

ಚಂದದ ಶೃಂಗಾರದ ಹೂದೋಟವಾಗಿ..

ಪುಟಿಯುವ ಮುದ್ದು ಮಗುವಾಗಿ..

ಜವಬ್ದಾರಿಯ ಸ್ಪಷ್ಪತೆಯ ನಿಲುವಾಗಿ...

ವೈವಿಧ್ಯಮಯ ಉಡುಗೆಯೊಳು ಆಕರ್ಷಕ ಧರೆಯಾಗಿ..

ಸರಳತೆಯ ಮುಗ್ದ ಸ್ನೇಹಿತೆಯಾಗಿ...

ಮಗಳಿಗೆ ಮಮತೆಯ ತಾಯಾಗಿ...

ನಯನಗಳಿಗೆ ತಂಪೆರೆವ ಸುಂದರ ಚೆಲುವೆಯಾಗಿ...... 

ಈ ಕವಿಯ ಮೌನವನ್ನೂ‌ ಮುರಿದು 

ಪದಗಳಲಿ ಅರಳುವ ಸುಮವಾಗಿ...

ನನ್ನೊಳಗೆ ಹರುಷದ ತರಂಗಗಳನು 

ನವಿರಾಗಿ ಮೀಟಿದ ಭಾವಾಂತರಂಗದ 

ಭಾ.. ನಿರ್ಗವಿಗೆ ಧನ್ಯೋಸ್ಮಿ✒️☺️

ಲೋಕಕೆ ಪಥವ ತೋರು

ಬರಡಾದ ಈ ಜಗವ ನೋಡು |
ಬಳಿ ಬಂದು ಸರಿದಾರಿ ತೋರು |
ತೀರದ ದಾಹ | ತಣಿಯದ ದೇಹ |
ದಣಿವರಿಯದೆ ಮೆರೆದಿದೆ ಮೋಹ |
ಬಾ ಪ್ರಭುವೇ ದರುಶನವ ನೀಡು |
ಪರಿಶುದ್ದ ಪಥವನ್ನು ತೋರು |

ಮಮಕಾರ ತೊರೆದು | ಮರೆಯಾದ ಸೇವೆ |
ಮನಸ್ಸಾರೆ ಬಯಕೆಯ ಬೇಗೆ |
ಅನುರಾಗ ಬಿರುಕು | ಅನುಸಾರ  ಸಿಡುಕು |
ಅನುಕಂಪ ಸುಡುತಿಹ ಜ್ವಾಲೆ |
ಪರಿತಪಿಸುವ ಪ್ರೀತಿ | ನಿಜವಳಿಸುವ ನೀತಿ |
ಕನವರಿಸದ ಕರುಣೆ | ಚಡಪಡಿಸುವ ಚಲನೆ |
ಹುಸಿ ಮಾರ್ಗದ ಸಾಕಾರವು ....
ಕೊನೆಗಾಣಿಸು ಮೋಸ | ಸರಿದೂಗಿಸು ವಿರಸ |
ತಿಳಿಗೊಳಿಸಲು ಬಹು ಬೇಗ ಬಾರಾ |

ಬಾಳೆಂಬ ಪಯಣ | ಬಂದಾಗ ಸ್ಮರಣ |
ಬದುಕ್ಕೆಲ್ಲಾ ಭಾವದ ಕಿರಣ |
ಭರವಸೆಗಳು ಕಥನ | ಭಯಭಕ್ತಿಗೆ ಮನನ |
ಬಲವಂತ ಸಾರುವ ಕರುಣ |
ಮರೆಮಾಚುವ ಸ್ಥಿರತೆ | ಮೆದುಮಾತಿನ ಕೊರತೆ |
ಮಿತವಲ್ಲದ ಘನತೆ | ಮೊರೆ ಕೇಳದ ಜನತೆ |
ಸುಳಿವಿಲ್ಲದ ಆತಂಕವೇ |
ಸವಿ ಜ್ಞಾನವ ಕಲಿಸು | ಹಿತ ನುಡಿಗಳ ನುಡಿಸು |

ನಿಜ ದನಿಗಳ ಒಂದಾಗಿಸಲು ಬಾರಾ

ಕಾಲಾಹರಣಬೇಡ







ಕಾಲಾಹರಣಬೇಡ 

                                                      ಕವನ್ರಾಗ್ 
ಸುಮ್ಮನೆ ಕೂತು
ಕಾಲಾಹರಣಬೇಡ
ಸಂತೆಯೊಳಗೆ ಬೆಲೆಯಿಲ್ಲದೆ
ಕಂತೆಗಳು ತೂಕಡಿಸುತ ಕೂತಂತೆ,
ಕಡಲಿನಾಳದಲಿ ಚಿಪ್ಪಿನೊಳ 
ಮುದುಡಿ ಅವಿತಿರುವ ಮುತ್ತಿನಂತೆ,
ಮುಂದೊಂದು ದಿನ ಅಂಧಕಾರದಲೇ 
ಮರೆಯಾಗಿಬಿಡುವೆ...
ಮನಸ್ಸು ಸೋತು ಹೋಗಲು ಕಾಯುತ್ತಿರದು
ವಯಸ್ಸು ಮುದುಡಿ ಕೂರಲು ಮುದಿಯಾಗದಿರದು
ಕಲ್ಪನೆ ಅಲ್ಪವಾಗುಳಿದಾಗ
ಕಲಾತ್ಮಕತೆ ಅಳಿದ್ಹೋಗುವುದು.......
ರೆಕ್ಕೆ ಬಲಿತ ಪಕ್ಷಿಯಂತೆ ಪಂಜರದಿಂದ್ಹೊರ ಬಾ
ಆಗಸದೆತ್ತರದಿ ಮಿನುಗುವ ತಾರೆಯಂತಾಗಲು ಬಾ
ಕಷ್ಟಕೋಟಲೆಗಳೊಳಗೆ 
ಕಠಿಣತೆಯಲಿ 
ಬಂಧಿಯಾಗಿ ಬರಿದಾದ ಬಾವಿಯೊಳಗಿನ 
ಕಪ್ಪೆಯಂತೆ....
ಸೊರಗಿ ಪಾಚಿಗಂಟಿ 
ಸೋತು ಕೊನೆಯಾಗದಿರು ಏನೂ ಇಲ್ಲದಂತೆ.
ಇಷ್ಟೇ ಪ್ರಪಂಚವೆಂದು
ಮೈಕೊಡವಿ ಎದ್ದೇಳು
ತೃಷೆಯಾರಿಸುವ ಉಷೆಯರಾಗ ಕೇಳಿಸುತ್ತಿದೆ!
ತಾಯಗರ್ಭದೊಳಗಿನಿಂದ 
ಹೊರಬಂದ ಕೂಸಂತ್ತಲ್ಲ,
ಕಾಲಗರ್ಭವ ಮೆಟ್ಟಿ ಹೊರ ಚಾಚಿದ ಬೆಳಕಂತೆ!!
ಕಪ್ಪು ಮೋಡದಿಂದ್ಹಿನಿಂದ ಹೊಮ್ಮುವ ಕಾಂತಿಯಂತೆ
ಹೊರಗೆ ಬಾ ನವಕಿರಣಗಳಂತೆ....!!!





ನಿಲ್ಲದ ಬದುಕು

  ಆಲೋಚನೆ ಯೋಚನೆಗಳಿಂದಲೇ ಆಚಾರ ವಿಚಾರಗಳ ಚಿಂತನೆಗಳಿಂದಲೇ ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು. ನಿಖರತೆಯಿಲ್ಲದ ಸಂಬಂಧಗಳಿಂದಾಗಿ ನಿಲುಮೆಗಳಿಲ್ಲದ ಸಹವಾಸಗಳಿಂದ...