Sunday, April 28, 2024

ಭಯದ ಅರ್ಥ ‌ನಿಶ್ಚಿತದ ಕೊರತೆ

 ಭಯದ ಅರ್ಥ ‌ನಿಶ್ಚಿತದ ಕೊರತೆ

ದೇವರಿಗೆ ವಿರುದ್ಧವಾಗಿ ನಡೆದರೆ ನರಕ‌ : ಭಯ
ಸೈತಾನನಿಗೆ ಹೊಂದಿಕೊಳ್ಳದಿರೆ ಸಂಕಟ : ಭಯ
ಕರ್ತವ್ಯ ಪಾಲಿಸದಿದ್ದರೆ ಶಿಕ್ಷೆ : ಭಯ
ಅನ್ಯಾಯ ಮಾಡಿದರೆ ದಂಡನೆ : ಭಯ
ಪರೀಕ್ಷೆಯಲ್ಲಿ ಮರೆವಿನ ಪರಿಣಾಮ : ಭಯ
ತನ್ನಿಚ್ಛೆಯಂತೆ ಇರಬೇಕೆಂದರೆ‌ : ಭಯ
ಆರೋಗ್ಯದ ಏರಿಳಿತದಲಿ : ಭಯ
ನೀತಿನಿಯಮಗಳ ಪಾಲಿಸದಿದ್ದರೆ : ಭಯ
ಪ್ರಕೃತಿ ವಿಕೋಪಗಳ : ಭಯ
ನಾಗರಿಕತೆಯ ತೀವ್ರತೆಯ : ಭಯ
ಭಯ ಭಯ ಭಯ ಭಯ...
ಭೂತಕಾಲದ.. 
ವರ್ತಮಾನ ಕಾಲ... 
ಭವಿಷ್ಯತ್ ಕಾಲ.. 
ಈ ದಿನಗಳ... ಮುಂದಿನ ದಿನಗಳ.. ಎಲ್ಲದರಲೂ.... ‌‌ಭಯ...
ಭಯವಿಲ್ಲದವನೂ,
ಅಜ್ಞಾನಿಯಾಗಿದ್ದರೂ ಬೋಧಿಸಬಲ್ಲ!
ಅತೃಪ್ತನಾಗಿದ್ದರೂ ಸಂತೋಷಪಡಿಸಬಲ್ಲ!
ಅತಂತ್ರನಾಗಿದ್ದರೂ ಆದರ್ಶನಾಗಬಲ್ಲ!
ಅಸೂಯೆಯುಳ್ಳವನಾಗಿದ್ದರೂ ಅನುಸರಿಸಬಲ್ಲ!
....... ಏಕೆಂದರೆ, ಇಂತವರಲ್ಲಿ ಭಯ ಇರುವುದಿಲ್ಲ!!
ಭಯ ಇಲ್ಲದಿರೆ ಹಿಂಜರಿಕೆ ಇರೊಲ್ಲ...
ಹಿಂಜರಿಕೆ ಇಲ್ಲದಿರೆ ಶೂನ್ಯತೆ ಇರೊಲ್ಲ...
ಶೂನ್ಯತೆ ಇಲ್ಲದಿರೆ ಮಾನ್ಯತೆಯ ಕೊರತೆ ಇರೊಲ್ಲ..
ಕೊರತೆ ಇಲ್ಲದಿರೆ ಸಂಪೂರ್ಣತೆಗೆ ಸೋಲಿರುವುದಿಲ್ಲ!!!
ಆದ್ದರಿಂದ,
ಧೈರ್ಯಗುಂದದಿರಿ...ಹಿಂಜರಿಯದಿರಿ....
ಧನ್ಯತೆಯ ಬದುಕಿಗೆಯೆಂಬ ನಂಬಿಕೆ ಇರಲಿ!!


No comments:

Post a Comment

ನಿಲ್ಲದ ಬದುಕು

  ಆಲೋಚನೆ ಯೋಚನೆಗಳಿಂದಲೇ ಆಚಾರ ವಿಚಾರಗಳ ಚಿಂತನೆಗಳಿಂದಲೇ ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು. ನಿಖರತೆಯಿಲ್ಲದ ಸಂಬಂಧಗಳಿಂದಾಗಿ ನಿಲುಮೆಗಳಿಲ್ಲದ ಸಹವಾಸಗಳಿಂದ...