Sunday, April 28, 2024

ನೈಜ ಪ್ರೇಮದ ನಿಜದನಿಯಿದು.


ಅನುಮಾನದ ಅವಮಾನದೊಳಗಿನ 
ಕತ್ತಲ ಕೋಣೆಯೊಳಗೆ ಪ್ರೀತಿಯ 
ನಾಟ್ಯವಾಡದೆ.. 
ನೆಚ್ಚಿಕೊಂಡ ಭಾವನೆಗಳಲಿ ತಪ್ಪನ್ನ್ಹುಡುಕಿ ಅಲ್ಪರನ್ನಾಗಿಸುವ 
ಬಿಗುವಾಗದೆ..
ಸುಡುಬಿಸಿಲಿನ ತಾಪವನು ತಂಪೆರೆವ ಜೊತೆಯೆನುತ
ನಾಟಕವಾಡದೆ...
ಸಪ್ತಸ್ವರಗಳ ಸೂಚನೆಯಲಿ ಸ್ತಬ್ದವಾಗಿಸುವ
ಕಂಠವಾಗದೆ...
ಮೈಮನಗಳ ಮಿಲನದೊಳಗೆ ಸಂಚಾಕಾರದ
ಸೂಚನೆಯಾಗದೆ...
ಕ್ಷಣಕ್ಷಣಗಳರ್ಪಣೆಯ ಸಂಗಮದಲಿ ಆತಂಕದ
ಕರಿಮೋಡವಾಗದೆ.....
ನಿರ್ಲಕ್ಷ್ಯದೊಳ ನಿರ್ನಾಮವಾಗಿಸುವ ನಿಧಿರೆಯಾಗದೆ...
ಸದಾ
'ನಿನಗಾಗಿಯೇ ನಾನು..' 'ನನಗಾಗಿಯೇ ನೀನು..' 
ಎನುವ ಸತ್ಯತೆ ಸಿಂಚನದ ಸಿಂಧುವಾಗುವುದೇ 
ನೈಜ ಪ್ರೇಮ!
ಕ್ಷೇಮದ ಕ್ಷಾಮಗಳ ಅಳತೆಗಳಿಲ್ಲದ ಅಮರ ಪ್ರೇಮ!!!

: ಒಲವು ಕವನ್ರಾಗ್, ಮೈಸೂರು :

No comments:

Post a Comment

ನಿಲ್ಲದ ಬದುಕು

  ಆಲೋಚನೆ ಯೋಚನೆಗಳಿಂದಲೇ ಆಚಾರ ವಿಚಾರಗಳ ಚಿಂತನೆಗಳಿಂದಲೇ ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು. ನಿಖರತೆಯಿಲ್ಲದ ಸಂಬಂಧಗಳಿಂದಾಗಿ ನಿಲುಮೆಗಳಿಲ್ಲದ ಸಹವಾಸಗಳಿಂದ...