ಬರಡಾದ ಈ ಜಗವ ನೋಡು |
ಬಳಿ ಬಂದು ಸರಿದಾರಿ ತೋರು |
ತೀರದ ದಾಹ | ತಣಿಯದ ದೇಹ |
ದಣಿವರಿಯದೆ ಮೆರೆದಿದೆ ಮೋಹ |
ಬಾ ಪ್ರಭುವೇ ದರುಶನವ ನೀಡು |
ಪರಿಶುದ್ದ ಪಥವನ್ನು ತೋರು |
ಮಮಕಾರ ತೊರೆದು | ಮರೆಯಾದ ಸೇವೆ |
ಮನಸ್ಸಾರೆ ಬಯಕೆಯ ಬೇಗೆ |
ಅನುರಾಗ ಬಿರುಕು | ಅನುಸಾರ ಸಿಡುಕು |
ಅನುಕಂಪ ಸುಡುತಿಹ ಜ್ವಾಲೆ |
ಪರಿತಪಿಸುವ ಪ್ರೀತಿ | ನಿಜವಳಿಸುವ ನೀತಿ |
ಕನವರಿಸದ ಕರುಣೆ | ಚಡಪಡಿಸುವ ಚಲನೆ |
ಹುಸಿ ಮಾರ್ಗದ ಸಾಕಾರವು ....
ಕೊನೆಗಾಣಿಸು ಮೋಸ | ಸರಿದೂಗಿಸು ವಿರಸ |
ತಿಳಿಗೊಳಿಸಲು ಬಹು ಬೇಗ ಬಾರಾ |
ಬಾಳೆಂಬ ಪಯಣ | ಬಂದಾಗ ಸ್ಮರಣ |
ಬದುಕ್ಕೆಲ್ಲಾ ಭಾವದ ಕಿರಣ |
ಭರವಸೆಗಳು ಕಥನ | ಭಯಭಕ್ತಿಗೆ ಮನನ |
ಬಲವಂತ ಸಾರುವ ಕರುಣ |
ಮರೆಮಾಚುವ ಸ್ಥಿರತೆ | ಮೆದುಮಾತಿನ ಕೊರತೆ |
ಮಿತವಲ್ಲದ ಘನತೆ | ಮೊರೆ ಕೇಳದ ಜನತೆ |
ಸುಳಿವಿಲ್ಲದ ಆತಂಕವೇ |
ಸವಿ ಜ್ಞಾನವ ಕಲಿಸು | ಹಿತ ನುಡಿಗಳ ನುಡಿಸು |
ನಿಜ ದನಿಗಳ ಒಂದಾಗಿಸಲು ಬಾರಾ
No comments:
Post a Comment