ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಹಿಂದುಳಿದ ವರ್ಗಗಳ ಹೋರಾಟಗಾರು ರಾಜ್ಯ ನಾಯಕರಾದ ಜಿ.ಎಂ ಗಾಡ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್.ಸಿ/ಎಸ್ಟಿ ಮತ್ತು ಸಣ್ಣ ಮತ್ತು ಅತಿ ಹಿಂದುಳಿದ ಸಮುದಾಯಗಳ ಸಭೆಯನ್ನು ಹೋಟೆಲ್ ಗ್ರೀನ್ ಹೆರಿಟೇಜ್‌ನಲ್ಲಿ ಬುಧವಾರ ಸಂಜೆ ನಡೆಯಿತು.

ಸಭೆಯಲ್ಲಿ ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆಯನ್ನು ನೂತನವಾಗಿ ಅಸ್ಥಿತ್ವಕ್ಕೆ ತರಲಾಯಿತು.

ಸಾಮಾಜಿಕ ಹೋರಾಟಗಾರರಾದ ಜಯರಾಜ್ ಹೆಗ್ಡೆ ಮತ್ತು ಜಿ.ಎಂ.ಅಂದಾನಿ, ಹೊಸಕೋಟೆ ಕುಮಾರ್, ಸುಂದರ ಹಣಕೊಳ ಇವರುಗಳ ಮಾರ್ಗದರ್ಶನದಲ್ಲಿ ನೂತನ ಸಂಚಾಲಕರ ಸಮಿತಿಯನ್ನು ರಚಿಸಲಾಯಿತು.

ನೂತನವಾಗಿ ಆಯ್ಕೆಯಾದ ಸಮಿತಿ 

ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು.(ನಾಯಕ), ಸಂಚಾಲಕ ಕಾರ್ಯದರ್ಶಿ ಸತ್ಯನಾರಾಯಣ (ಮಡಿವಾಳ), ಸಂಚಾಲಕರು ನಾಡನಹಳ್ಳಿ ಚಂದ್ರಶೇಖರ್ (ದಲಿತ), ತಗಡೂರು ಕೃಷ್ಣ ಉಪ್ಪಾರ), ರಾಮಕೃಷ್ಣ (ಅಲೆಮಾರಿ), ಮುಳ್ಳೂರು ಮಹೇಶ್ (ಕುಂಬಾರ), ರಾಬರ್ಟ್ (ಕ್ರಿಶ್ಚಿಯನ್), ನಾಗರಾಜು ಟಿಂಬರ್, (ವಿಶ್ವಕರ್ಮ), ಅಕ್ಮಲ್ ಪಾಷ(ಮುಸ್ಲಿಂ), ಅಶೋಕಪುರಂ ಜೋಗಿ ಮಹೇಶ್ (ದಲಿತ), ತೊರವಳ್ಳಿ ಟಿ.ಎಲ್.ಸ್ವಾಮಿ (ನಾಯಕ), ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.