Tuesday, March 26, 2024

ಅಮ್ಮಾ..... ಜೊತೆಗಿರುವ ದೇವತೆ |

 ಅಮ್ಮಾ..... ಜೊತೆಗಿರುವ ದೇವತೆ | 

ಅರಿವಿಲ್ಲದ ಕೂಸಿಗೆ |  ಹೆತ್ತವಳೇ ಆಸರೆ | ಮೊದಮೊದಲಿನ ಯಾಚನೆ !

ಅಮ್ಮಾ ... ಎನದಿರಲು ಸಾಧ್ಯವೇ ? ಹೊಸ ಲೋಕಕೆ ಇದೆ ತಾನೆ ಸೂಚನೆ !

 ಕರುಣೆಯ ತೋಟವು | ಕೋಮಲ ಸುಮನವು | ಯಜಮಾನಿ | ನಿಜದಾನಿ |

ನೋವಿನ ಬಿಗಿತಕು | ನಗುವಿನ ಲಾಸ್ಯಕು – ವಾಗ್ದೇವಿ | ಭೂದೇವಿ |

ತಾಯಿಯೆ ಉಸಿರಿಗು ಹಸಿರಿಗೂ ಕಾರಣ...

ತೊರೆದರೆ ಜನುಮಕೆ ದೋಷವೇ ಪೂರಣ...

ಸೇವೆಯ ಸದ್ಗತಿ | ಸ್ಥೆöÊರ್ಯದ ಸಂಸ್ಕೃತಿ | ಚಿರ ಚಂದ್ರಿಕೆ | ಮಹ ಮಾತೃಕೆ |

ನಲ್ಮೆಯ ಸಿಂಚನ | ನೇಮದ ಸಾಂತ್ವನ – ವರ ಪೂಜಿತೆ | ಅಭಿಜಾತೆ |

ಮಮತೆಗು ಒಲುಮೆಗು ಸ್ಫೂರ್ತಿಯ ಸ್ಪಂದನ |

ಮಾನಕು ಜ್ಞಾನಕೂ ಹಿರಿಮೆಯ ಲಾಂಚನ |

 ಅಮ್ಮಾ..... ಜೊತೆಗಿರುವ ದೇವತೆ | 

ಅರಿವಿಲ್ಲದ ಕೂಸಿಗೆ |  ಹೆತ್ತವಳೇ ಆಸರೆ | ಮೊದಮೊದಲಿನ ಯಾಚನೆ !

ಅಮ್ಮಾ ... ಎನದಿರಲು ಸಾಧ್ಯವೇ ? ಹೊಸ ಲೋಕಕೆ ಇದೆ ತಾನೆ ಸೂಚನೆ !

No comments:

Post a Comment

ನಿಲ್ಲದ ಬದುಕು

  ಆಲೋಚನೆ ಯೋಚನೆಗಳಿಂದಲೇ ಆಚಾರ ವಿಚಾರಗಳ ಚಿಂತನೆಗಳಿಂದಲೇ ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು. ನಿಖರತೆಯಿಲ್ಲದ ಸಂಬಂಧಗಳಿಂದಾಗಿ ನಿಲುಮೆಗಳಿಲ್ಲದ ಸಹವಾಸಗಳಿಂದ...