ಭಾರವಾದ ಬದುಕಿನವರಿಗೆ
ಭಯದಿಂದ ಬಳಲಿದವರಿಗೆ
ಭಗ್ನದಿಂದಿರುವ ಭಾವಗಳಿಗೆ
ಭಂಗಿತಗೊಂಡ ಭಾಂಧವ್ಯಗಳಿಗೆ
ಭಸ್ಮವಾಗುವೆನೆಂದುಕೊಂಡ ಬಾಡಿದವರಿಗೆ
ಬಿರುಸುಗೊಳಿಸಲು ಬೆಂಬಲವಾಗಿರುವ
ಭರವಸೆಯ ಭಾಷೆಗಳೇ
ಭವ್ಯದಾಧರಣೆಗಳು...
ಭರವಸೆಯ
ಭಾಗಿತ್ವವೇ
ಭಾಗ್ಯದ ಬಾಗಿಲುಗಳು!!!
ಭಾರವಾದ ಬದುಕಿನವರಿಗೆ
ಭಯದಿಂದ ಬಳಲಿದವರಿಗೆ
ಭಗ್ನದಿಂದಿರುವ ಭಾವಗಳಿಗೆ
ಭಂಗಿತಗೊಂಡ ಭಾಂಧವ್ಯಗಳಿಗೆ
ಭಸ್ಮವಾಗುವೆನೆಂದುಕೊಂಡ ಬಾಡಿದವರಿಗೆ
ಬಿರುಸುಗೊಳಿಸಲು ಬೆಂಬಲವಾಗಿರುವ
ಭರವಸೆಯ ಭಾಷೆಗಳೇ
ಭವ್ಯದಾಧರಣೆಗಳು...
ಭರವಸೆಯ
ಭಾಗಿತ್ವವೇ
ಭಾಗ್ಯದ ಬಾಗಿಲುಗಳು!!!
ಅಮ್ಮಾ..... ಜೊತೆಗಿರುವ ದೇವತೆ |
ಅರಿವಿಲ್ಲದ ಕೂಸಿಗೆ | ಹೆತ್ತವಳೇ ಆಸರೆ | ಮೊದಮೊದಲಿನ ಯಾಚನೆ !
ಅಮ್ಮಾ ... ಎನದಿರಲು ಸಾಧ್ಯವೇ ? ಹೊಸ ಲೋಕಕೆ ಇದೆ ತಾನೆ ಸೂಚನೆ !
ಕರುಣೆಯ ತೋಟವು | ಕೋಮಲ ಸುಮನವು | ಯಜಮಾನಿ | ನಿಜದಾನಿ |
ನೋವಿನ ಬಿಗಿತಕು | ನಗುವಿನ ಲಾಸ್ಯಕು – ವಾಗ್ದೇವಿ | ಭೂದೇವಿ |
ತಾಯಿಯೆ ಉಸಿರಿಗು ಹಸಿರಿಗೂ ಕಾರಣ...
ತೊರೆದರೆ ಜನುಮಕೆ ದೋಷವೇ ಪೂರಣ...
ಸೇವೆಯ ಸದ್ಗತಿ | ಸ್ಥೆöÊರ್ಯದ ಸಂಸ್ಕೃತಿ | ಚಿರ ಚಂದ್ರಿಕೆ | ಮಹ ಮಾತೃಕೆ |
ನಲ್ಮೆಯ ಸಿಂಚನ | ನೇಮದ ಸಾಂತ್ವನ – ವರ ಪೂಜಿತೆ | ಅಭಿಜಾತೆ |
ಮಮತೆಗು ಒಲುಮೆಗು ಸ್ಫೂರ್ತಿಯ ಸ್ಪಂದನ |
ಮಾನಕು ಜ್ಞಾನಕೂ ಹಿರಿಮೆಯ ಲಾಂಚನ |
ಅಮ್ಮಾ..... ಜೊತೆಗಿರುವ ದೇವತೆ |
ಅರಿವಿಲ್ಲದ ಕೂಸಿಗೆ | ಹೆತ್ತವಳೇ ಆಸರೆ | ಮೊದಮೊದಲಿನ ಯಾಚನೆ !
ಅಮ್ಮಾ ... ಎನದಿರಲು ಸಾಧ್ಯವೇ ? ಹೊಸ ಲೋಕಕೆ ಇದೆ ತಾನೆ ಸೂಚನೆ !
‘ಲೇಖನಿ ಕತ್ತಿಗಿಂತಲೂ ಹರಿತವಾದದ್ದು’
ಎಂಬ ಮಾತು ಲೇಖನಿ ಎಂದೊಡನೆ ಸಾಮಾನ್ಯವಾಗಿ ಎಲ್ಲರ ಮನಸ್ಸಿನೊಳಗೆ ಗೋಚರಿಸಿಕೊಳ್ಳುವ ವಿಷಯ.
ಹಾಗೆಂದ ಮಾತ್ರಕ್ಕೆ ಲೇಖನಿ ಹರಿತವಾದ ಪದಗಳನ್ನು ಮಾತ್ರವೇ ಬರೆಸಿಕೊಳ್ಳಲ್ಪಡುತ್ತದೆ ಎಂದರೆ ಅದು ಸತ್ಯವೆಂದಲ್ಲ. ಹರೆಯದ ವಯಸ್ಸಿನಲ್ಲಿ ಕನಸಿನ ಲೋಕದಲ್ಲಿ ತೇಲುವ ಪ್ರತಿಯೊಂದು ಹೃದಯವು ಲೇಖನಿ ಹಿಡಿದಾಕ್ಷಣ ರಸಿಕತೆ ಕಾಣದ ತೀರದಲಿ ತೇಲ ತೊಡಗುತ್ತವೆ. ಕಣ್ಣಿಗೆ ಕಾಣುವ ಪ್ರತಿಯೊಂದು ಸೌಂಧರ್ಯವನ್ನು ಹಾಳೆಯ ಮೇಲೆ ರೂಪಿಸುತ್ತದೆ. ಮನದಾಳದ ಭಾವನೆಗಳಿಗೆ ಸಾಕ್ಷಿಯಾಗುವ ಬರಹಗಳು ವಿವಿಧ ಪ್ರಕಾರದಲ್ಲಿ ವಿಚಾರಗಳಿಗೆ ಸ್ಪೂರ್ತಿಯಾಗಿ ಓದುಗನ ಮೈಮನಗಳನ್ನು ತಟ್ಟುತ್ತವೆ. ವಿವರಿಸಲಸಾಧ್ಯವಾದ ಗೋಚರ ಅಗೋಚರಗಳನ್ನು ಮನಸ್ಸಿನ ಬದುಕಿನಲಿ ಸತ್ಯತೆಗೆ ಸ್ಪೂರ್ತಿಯಾಗಿ ಕಂಡು ಅನುಭವಿಸುವಂತೆ ಮಾಡುತ್ತದೆ. ಓದುತ್ತಾ ಓದುತ್ತಾ ತನ್ನದೇ ಲೋಕದಲ್ಲಿ ಪಯಣಿಸುವ ವ್ಯಕ್ತಿಯ ಹೃದಯದಲ್ಲಿ ವರ್ಣಿಸಲಾಗದಷ್ಟು ಆನಂದವನ್ನು ಹೊಂದುತ್ತಾನೆ.
ಇದು ಪ್ರತಿಯೊಬ್ಬ ಓದಿನ ರಸಿಕನಿಗೂ ಮನದಟ್ಟಾಗಿರುವ ವಿಷಯ. ಆದರೆ ಇಂದಿನ ಪ್ರಪಂಚ ವೈಜ್ಞಾನಿಕ ಒಲುಮೆಯ ಹಿಡಿತದಲ್ಲಿ ಬರೆಯುವ ಹವ್ಯಾಸ ಸಾಕಷ್ಟಿದ್ದರೂ, ಓದುವ ಅಭ್ಯಾಸ ಕೆಲವೇ ಕೆಲವು ಮಂದಿಗಳಿಗಿರಬಹುದು.
ಏನೇಯಾದರೂ ‘ಕವನ, ಚುಟುಕ, ಹನಿಗವನ...’ ಗಳು ಇನ್ನೂ ಯೌವನದ ಚಿಲುಮೆಗಳನ್ನು ಆವರಿಸಿಕೊಂಡಿವೆ. ಹೃದಯ ಗೆದ್ದ, ಸೋತವರೊಂದಿಗೆ ಕವನಗಳ ಹಂಚಿಕೆ ಮುಂದುವರೆಯುತ್ತಿವೆ. ಚಲನಚಿತ್ರಗೀತೆ, ಭಾವಗೀತೆ, ಜನಪದಗೀತೆ, ಕ್ರಾಂತಿಗೀತೆಗಳು, ದೇಶಭಕ್ತಿಗೀತೆ, ಸಂದೇಶಗೀತೆಗಳು ಹೀಗೆ ಗೀತ ಸಾಹಿತ್ಯದ ಮೂಲಕ ಕವನಗಳು ಎಲ್ಲರನ್ನು ತನ್ನತ್ತ ಸೆಳೆದುಕೊಂಡಿದೆ.
‘ಕವನ್ರಾಗ್ ಕವನಗಳು’ ಹೊಸ ಸಂಚಲನವೇನಲ್ಲ. ಬರೆದಿಟ್ಟದ್ದು, ಬರೆಯಬೇಕನ್ನಿಸಿದ್ದು ಪುಸ್ತಕ ರೂಪ ಪಡೆಯಲು ಆರ್ಥಿಕ ಸ್ಥಿತಿಗತಿಗಳ ಕೊರತೆಯಲ್ಲಿ ಹಾಗೆಯೇ ಹಾಳೆಗಳಲ್ಲಿ ನಿದ್ರಿಸುತ್ತಿವೆ, ನಿದ್ರಿಸಲು ಹೊರಟಿವೆ. ಇವುಗಳನ್ನು ಎಚ್ಚರಿಸಿ ಕವನ ರಸಿಕರ ಮನಗಳ ಗೆಳೆತನವನ್ನು ಇಚ್ಛಿಸಿ ‘ಬ್ಲಾಗ್’ ಮೂಲಕ ಕಾಣಿಸಿಕೊಳ್ಳುತ್ತಿವೆ.
ನಿಮ್ಮ ಸ್ನೇಹದ ಪ್ರೋತ್ಸಾಹ ನಮಗೆ ಇನ್ನಷ್ಟೂ ಸ್ಪೂರ್ತಿದಾಯಕವಾಗಿರಬಲ್ಲದು. ನಿಮ್ಮ ಅನಿಸಿಕೆ, ಸಲಹೆ ಸೂಚನೆಗಳಿಗೆ ಈ ಸ್ನೇಹ ಕಾದಿದೆ.
: ಕವನ್ರಾಗ್ 9448942998
ಆಲೋಚನೆ ಯೋಚನೆಗಳಿಂದಲೇ ಆಚಾರ ವಿಚಾರಗಳ ಚಿಂತನೆಗಳಿಂದಲೇ ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು. ನಿಖರತೆಯಿಲ್ಲದ ಸಂಬಂಧಗಳಿಂದಾಗಿ ನಿಲುಮೆಗಳಿಲ್ಲದ ಸಹವಾಸಗಳಿಂದ...