Sunday, June 9, 2024

ನಿಲ್ಲದ ಬದುಕು

 

ಆಲೋಚನೆ ಯೋಚನೆಗಳಿಂದಲೇ
ಆಚಾರ ವಿಚಾರಗಳ ಚಿಂತನೆಗಳಿಂದಲೇ
ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು.
ನಿಖರತೆಯಿಲ್ಲದ ಸಂಬಂಧಗಳಿಂದಾಗಿ
ನಿಲುಮೆಗಳಿಲ್ಲದ ಸಹವಾಸಗಳಿಂದಾಗಿ
ನಿರೀಕ್ಷಿಸಿದ್ದೆಲ್ಲವೂ ನಿಂತ ನೀರಾದಾಗ ಅರ್ಥವರಿಯದ
ಜೀವನ ಸತ್ಯಮಿಥ್ಯಗಳ ಸಂಶೋಧನೆಯಲ್ಲೇ
ಜಡವಾಗಿರಲು ಬಯಸದೇ ಮುಂದೇನೆಂದು
ಯೋಚನೆ ಆಲೋಚನೆಗಳಿಂದಾವೃತವಾಗಿದೆ
ಮುಗಿದರು ಮುಗಿಸಿಕೊಳ್ಳಲಾಗದ ಬದುಕು!!!



ನಿಲ್ಲದ ಬದುಕು

  ಆಲೋಚನೆ ಯೋಚನೆಗಳಿಂದಲೇ ಆಚಾರ ವಿಚಾರಗಳ ಚಿಂತನೆಗಳಿಂದಲೇ ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು. ನಿಖರತೆಯಿಲ್ಲದ ಸಂಬಂಧಗಳಿಂದಾಗಿ ನಿಲುಮೆಗಳಿಲ್ಲದ ಸಹವಾಸಗಳಿಂದ...